ದೇವರ ಹಿಪ್ಪರಗಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ದೇವರ ಹಿಪ್ಪರಗಿ ಗ್ರಾಮವು ವಿಜಯಪುರ - ಗುಲ್ಬರ್ಗಾ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೨೫ ಕಿ. ಮಿ. ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ನಗರವನ್ನು ಹೊಸ ತಾಲ್ಲೂಕೆಂದು ರಚಿಸಿದೆ. == ಭೌಗೋಳಿಕ == ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦" ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ. == ಹವಾಮಾನ == ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°-೪೨° ಡಿಗ್ರಿ ಸೆಲ್ಸಿಯಸ್ ಚಳಿಗಾಲ ಮತ್ತು ಮಳೆಗಾಲ - ೧೮°-೨೮° ಡಿಗ್ರಿ ಸೆಲ್ಸಿಯಸ್. ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ. == ಜನಸಂಖ್ಯೆ == ಗ್ರಾಮದಲ್ಲಿ ಜನಸಂಖ್ಯೆ ಸುಮಾರು 22000 ಇದೆ. ಅದರಲ್ಲಿ 11500 ಪುರುಷರು ಮತ್ತು 10500 ಮಹಿಳೆಯರು ಇದ್ದಾರೆ. == ಸಾಂಸ್ಕೃತಿಕ == ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. == ಕಲೆ ಮತ್ತು ಸಂಸ್ಕೃತಿ == ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. == ಧರ್ಮ == ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ. == ಭಾಷೆ == ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. == ದೇವಾಲಯ == ಶ್ರೀ ಮಹಾಲಕ್ಷ್ಮಿ ದೇವಾಲಯ ಶ್ರೀ ದುರ್ಗಾದೇವಿ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಶ್ರೀ ಮಲ್ಲಯ್ಯನ ದೇವಾಲಯ ಶ್ರೀ ಪಾಂಡುರಂಗ ದೇವಾಲಯ ಶ್ರೀ ಹಣಮಂತ ದೇವಾಲಯ ಶ್ರೀ ಕಲ್ಮೇಶ್ವರ ದೇವಾಲಯ ಶ್ರೀ ಕರಿ ಸಿದ್ದೇಶ್ವರ ದೇವಾಲಯ ಶ್ರೀ ರಾವುತರಾಯನ ದೇವಾಲಯ ಶ್ರೀ ಚೌಡೇಶ್ವರಿ ದೇವಾಲಯ ಶ್ರೀ ವೀರಣ್ಣ ದೇವಾಲಯ ಶ್ರೀ ಮಡಿವಾಳೇಶ್ವರ ದೇವಾಲಯ ಶ್ರೀ ಹೆಗ್ಗಪ್ಪ ದೇವಾಲಯ == ಮಸೀದಿ == ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ. == ನೀರಾವರಿ == ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಸಹಕಾರಿ ಬ್ಯಾಂಕ ಮತ್ತು ಸಂಘಗಳು == ಮುರುಗೇಶ ನಿರಾಣಿ ಕೊ-ಆಪರೇಟಿವ ಬ್ಯಾಂಕ, ದೇವರ ಹಿಪ್ಪರಗಿ ಪ್ರಗತಿ ಪಟ್ಟಣ ಕೊ-ಆಪರೇಟಿವ ಬ್ಯಾಂಕ, ದೇವರ ಹಿಪ್ಪರಗಿ ಅಜ಼ಾದ ಕೊ-ಅಪರೇಟಿವ ಬ್ಯಾಂಕ, ದೇವರ ಹಿಪ್ಪರಗಿ ದೇವರ ಹಿಪ್ಪರಗಿ ಸಹಕಾರಿ ಸಂಘ, ದೇವರ ಹಿಪ್ಪರಗಿ ಜಡೇಶ್ವರ ಕ್ರೆಡಿಟ ಕೋ-ಆಪರೇಟಿವ ಸಂಘ, ದೇವರ ಹಿಪ್ಪರಗಿ ವೀರರಾಣಿ ಚೆನ್ನಮ್ಮ ವಿವಿದೋದ್ದೇಶ ಸಂಘ, ದೇವರ ಹಿಪ್ಪರಗಿ ವಿಜಯಶ್ರೀ ವಿವಿದೋದ್ದೇಶ ಸಂಘ, ದೇವರ ಹಿಪ್ಪರಗಿ == ಕೃಷಿ ಮತ್ತು ತೋಟಗಾರಿಕೆ == ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ. == ಆರ್ಥಿಕತೆ == ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. == ಉದ್ಯೋಗ == ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ. == ಬೆಳೆ == ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೂಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತ್ತಂಬರಿ ಇತ್ಯಾದಿ. == ಸಸ್ಯ == ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ , ಹುಣಸೆ ಮರ ಮತ್ತು ಅರಳಿ ಮರ ಇತ್ಯಾದಿ. == ಪಾರಂಪರಿಕ ಮರ == ಸುಮಾರು ೮೮೫ ವರುಷ ಗಳ ಹಳೆಯದಾದ ಹುಣಸೆ ಮರವಿದೆ. ಇದು ದೇವರ ಹಿಪ್ಪರಗಿ ಮತ್ತು ಗುಲ್ಬರ್ಗ ರಸ್ತೆಯಲ್ಲಿರುವ ಮಲ್ಲಯ್ಯನ ದೇವಸ್ಥಾನದ ಮುಂದೆ ಇದೆ. ಈ ಮರ ವಿಶಾಲವಾಗಿ ಹರಡಿಕೊಂಡಿದ್ದು ಮರದ ಸುತ್ತಳತೆ ೭.೭ ಮೀಟರ ಮತ್ತು ಎತ್ತರ ೩೯.೩೯ ಮೀಟರ ಇದೆ.ಈ ಮರ ವನ್ನು ಮಡಿವಾಳ ಮಾಚಯ್ಯನ ಕಾಲದ್ದೆಂದು ಊಹಿಸಬಹುದಾಗಿದೆ. ಕರ್ನಾಟಕ ಸರಕಾರ ಇದನ್ನು ಪಾರಂಪರಿಕ ಮರವೆಂದು ಘೋಷಿಸಿದೆ. ಡೆಕ್ಕನ್ ಹೆರಾಲ್ಡ ಮತ್ತು ಟೈಮ್ಸ್ ಆಫ಼್ ಇಂಡಿಯಾ ಪತ್ರಿಕೆಯಲ್ಲಿ ಉಲ್ಲೇಖವಾಗಿದೆ. == ಪ್ರಾಣಿ == ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. == ಹಬ್ಬ == ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. == ಶಿಕ್ಷಣ == ಮಹರ್ಷಿ ವಾಲ್ಮಿಕಿ ಕಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ತಾಹಾ ಕಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಶಾರದಾ ಕಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಚೈತನ್ಯ ಕಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಬಿ.ಎಲ್.ಡಿ.ಈ.ಎ. ಕಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಸರ್ವಜ್ಣ ಕಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಜೆ.ಎಮ್.ಜೆ. ಕಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಎಸ್.ಎಸ್. ಹಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಜಗಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಚೈತನ್ಯ ಹಿರಿಯ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರ ಹಿಪ್ಪರಗಿ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ದೇವರ ಹಿಪ್ಪರಗಿ ಬಿ.ಡಿ.ಈ. ಪ್ರೌಡ ಶಾಲೆ, ದೇವರ ಹಿಪ್ಪರಗಿ ಶ್ರೀ ಸಿದ್ದೇಶ್ವರ ಪ್ರೌಡ ಶಾಲೆ, ದೇವರ ಹಿಪ್ಪರಗಿ ಶ್ರೀ ವೆಂಕಟೇಶ್ವರ ಪ್ರೌಡ ಶಾಲೆ, ದೇವರ ಹಿಪ್ಪರಗಿ ಎಸ್.ಎಸ್. ಪ್ರೌಡ ಶಾಲೆ, ದೇವರ ಹಿಪ್ಪರಗಿ ಡಿ.ಎಚ್. ಪ್ರೌಡ ಶಾಲೆ, ದೇವರ ಹಿಪ್ಪರಗಿ ಸರಕಾರಿ ಉರ್ದು ಪ್ರೌಡ ಶಾಲೆ, ದೇವರ ಹಿಪ್ಪರಗಿ ಶ್ರೀ ಸಿದ್ದೇಶ್ವರ ಪದವಿಪೂರ್ವ ಮಹಾವಿದ್ಯಾಲಯ, ದೇವರ ಹಿಪ್ಪರಗಿ ಮಹಾತ್ಮ ಗಾಂಧಿ ಸ್ಮಾರಕ ಪದವಿಪೂರ್ವ ಮಹಾವಿದ್ಯಾಲಯ, ದೇವರ ಹಿಪ್ಪರಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ದೇವರ ಹಿಪ್ಪರಗಿ ಶ್ರೀ ವೆಂಕಟೇಶ್ವರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ದೇವರ ಹಿಪ್ಪರಗಿ ಶ್ರೀ ವೆಂಕಟೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ದೇವರ ಹಿಪ್ಪರಗಿ ಶ್ರೀ ಸರ್ವಜ್ಣ ಕೈಗಾರಿಕಾ ತರಬೇತಿ ಕೇಂದ್ರ, ದೇವರ ಹಿಪ್ಪರಗಿ == ದೇವರ ಹಿಪ್ಪರಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು == == ರಾಜಕೀಯ == ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ದೇವರ ಹಿಪ್ಪರಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. ಕ್ಷೇತ್ರದ ಇತಿಹಾಸ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದ ದೇವರ ಹಿಪ್ಪರಗಿ ಗ್ರಾಮ ವಿಜಯಪುರ - ಗುಲ್ಬರ್ಗಾ ಹೆದ್ದಾರಿಯಲ್ಲಿದೆ. ಮೂರು ತಾಲೂಕುಗಳನ್ನೊಳಗೊಂಡಿರೋ ಈ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಈ ಕ್ಷೇತ್ರದ ಹೆಸರು ದೇವರ ಹಿಪ್ಪರಗಿ ಎಂದು ಬದಲಾಯಿತು. ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹೋಬಳಿ ಕೈಬಿಟ್ಟು, ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಹೋಬಳಿಯನ್ನು ಈ ಕ್ಷೇತ್ರದಲ್ಲಿ ಸೇರಿಸಲಾಯಿತು. ಕ್ಷೇತ್ರದ ವಿಶೇಷತೆ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ನಡಹಳ್ಳಿ ಪಾಟಿಲ ಸತತ 2013 ಮತ್ತು 2008ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಬಿ.ಎಸ್ ಪಾಟೀಲ (ಸಾಸನೂರ) ಅವರು ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು. ಶಿವಪುತ್ರಪ್ಪ ದೇಸಾಯಿ 5 ಬಾರಿ ಸ್ಪರ್ಧಿಸಿ 3 ಬಿ.ಎಸ್.ಪಾಟೀಲ(ಸಾಸನೂರ)ನ್ನು ಸೋಲಿಸಿ ಆಯ್ಕೆಯಾಗಿದ್ದು ಹಾಗೂ ಇಬ್ಬರು ಸಂಬಂಧಿಕರಾಗಿದ್ದು ವಿಶೇಷವಾಗಿದೆ. ಶಿವಪುತ್ರಪ್ಪ ದೇಸಾಯಿಯವರು ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರು. 1978ರಿಂದ 2008ವರೆಗೆ ಶಿವಪುತ್ರಪ್ಪ ದೇಸಾಯಿ ಹಾಗೂ ಬಿ.ಎಸ್.ಪಾಟೀಲ(ಸಾಸನೂರ) ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಿಎಸ್ ಪಾಟೀಲ ಸಾಸನೂರ 1978ರಲ್ಲಿ ಜನತಾ ಪಕ್ಷ ಹಾಗೂ 1983ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ 1986ರಲ್ಲಿ ಚುನಾವಣೆ ಎದುರಾಯಿತು. ಇದು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. ಜನತಾ ಪಕ್ಷದಿಂದ ಸ್ಪರ್ಧಿಸಿದ ಅಳಿಯ ಶಿವಪುತ್ರಪ್ಪ ದೇಸಾಯಿ, ಮಾವ ಸಾಸನೂರ ಅವರ ಹ್ಯಾಟ್ರಿಕ್ ಸಾಧನೆಗೆ ಬ್ರೇಕ್ ನೀಡಿದ್ದರು. ಮತ್ತೆ 1989ರಲ್ಲಿ ಮಾವ ಬಿಎಸ್ ಪಾಟೀಲ ಸಾಸನೂರ ಅಳಿಯ ಶಿವಪುತ್ರಪ್ಪ ದೇಸಾಯಿ ಅವರನ್ನು 15395 ಮತಗಳಿಂದ ಪರಾಭವಗೊಳಿಸಿದ್ದರು. ನಂತರ 1994ರಲ್ಲಿ ಅದೇ ಪಕ್ಷದಿಂದ ಶಿವಪುತ್ರಪ್ಪ ದೇಸಾಯಿ ತಮ್ಮ ಮಾವನನ್ನು 12427 ಮತಗಳಿಂದ ಸೋಲಿಸಿದರು. 1999ರಲ್ಲಿ ಎದುರಾದ ಚುನಾವಣೆಯಲ್ಲಿ ಪುನಃ ಬಿಎಸ್ ಪಾಟೀಲ ಸಾಸನೂರ ಅಳಿಯನನ್ನು ಪರಾಭಗೊಳಿಸಿದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಶಿವಪುತ್ರಪ್ಪ ದೇಸಾಯಿ ಅವರು ಮತ್ತೆ ಮಾವನನ್ನು ಸೋಲಿಸಿದ್ದರು. ಜನಪ್ರತಿನಿಧಿಗಳ ವಿವರ == ಮಳೆ ಮಾಪನ ಕೇಂದ್ರ == ಮಳೆ ಮಾಪನ ಕೇಂದ್ರ, ದೇವರ ಹಿಪ್ಪರಗಿ == ಬ್ಯಾಂಕ್ == ಎಸ್.ಬಿ.ಐ.ಬ್ಯಾಂಕ್, ದೇವರ ಹಿಪ್ಪರಗಿ ಸಿಂಡಿಕೇಟ್ ಬ್ಯಾಂಕ್, ದೇವರ ಹಿಪ್ಪರಗಿ ಡಿ ಸಿ ಸಿ ಬ್ಯಾಂಕ, ದೇವರ ಹಿಪ್ಪರಗಿ == ಪಟ್ಟಣ ಪಂಚಾಯತಿ == ಪಟ್ಟಣ ಪಂಚಾಯತಿ, ದೇವರ ಹಿಪ್ಪರಗಿ == ದೂರವಾಣಿ ವಿನಿಮಯ ಕೇಂದ್ರ == ದೂರವಾಣಿ ವಿನಿಮಯ ಕೇಂದ್ರ, ದೇವರ ಹಿಪ್ಪರಗಿ ದೇವರ ಹಿಪ್ಪರಗಿ - 08424 == ಅಂಚೆ ಕಚೇರಿ == ಅಂಚೆ ಕಚೇರಿ, ದೇವರ ಹಿಪ್ಪರಗಿ == ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ == ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ದೇವರ ಹಿಪ್ಪರಗಿ == ಹಾಲು ಉತ್ಪಾದಕ ಸಹಕಾರಿ ಸಂಘ == ಹಾಲು ಉತ್ಪಾದಕ ಸಹಕಾರಿ ಸಂಘ, ದೇವರ ಹಿಪ್ಪರಗಿ == ಪ್ರಾಥಮಿಕ ಆರೋಗ್ಯ ಕೇಂದ್ರ == ಪ್ರಾಥಮಿಕ ಆರೋಗ್ಯ ಕೇಂದ್ರ, ದೇವರ ಹಿಪ್ಪರಗಿ == ರೈತ ಸಂಪರ್ಕ ಕೇಂದ್ರ == ರೈತ ಸಂಪರ್ಕ ಕೇಂದ್ರ, ದೇವರ ಹಿಪ್ಪರಗಿ == ಕಂದಾಯ ಕಚೇರಿ == ಕಂದಾಯ ಕಚೇರಿ, ದೇವರ ಹಿಪ್ಪರಗಿ == ನೆಮ್ಮದಿ (ಹೋಬಳಿ) ಕೇಂದ್ರ == ನೆಮ್ಮದಿ ಕೇಂದ್ರ, ದೇವರ ಹಿಪ್ಪರಗಿ == ಪಶು ಆಸ್ಪತ್ರೆ == ಪಶು ಆಸ್ಪತ್ರೆ ಮತ್ತು ಕೃತಕ ಗರ್ಭಧಾರಣಾ ಕೇಂದ್ರ, ದೇವರ ಹಿಪ್ಪರಗಿ == ವಿದ್ಯುತ್ ಪರಿವರ್ತನಾ ಕೇಂದ್ರ == 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಹಿಪ್ಪರಗಿ 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಹಿಪ್ಪರಗಿ == ಕೃಷಿ ಮಾರುಕಟ್ಟೆ == ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ದೇವರ ಹಿಪ್ಪರಗಿ == ಪೋಲಿಸ್ ಠಾಣೆ == ಪೋಲಿಸ್ ಠಾಣೆ, ದೇವರ ಹಿಪ್ಪರಗಿ == ರಾಜ್ಯ ಹೆದ್ದಾರಿ == ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ. == ಸರಕಾರಿ ವಾಹನ ನಿಲ್ದಾಣ == ಸರಕಾರಿ ವಾಹನ ನಿಲ್ದಾಣ, ದೇವರ ಹಿಪ್ಪರಗಿ ಬಿಜಾಪುರ ಕರ್ನಾಟಕ